ಇದೀಗ ಕರ್ನಾಟಕ ಸರ್ಕಾರ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ ವೃತ್ತಿನಿರತ ಮಹಿಳಾ ಕುಶಲಕರ್ಮಿಗಳಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ವಿತರಿಸಲು ಮುಂದಾಗಿದೆ ಅಷ್ಟೇ ಅಲ್ಲದೆ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು ಯೋಜನೆಯಡಿಯಲ್ಲಿ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ವಿದ್ಯುತ್ ಚಾಲಿತ ಬಡಗಿ ಉಪಕರಣ ಹಾಗೂ ವಿವಿಧ ಕಸುಬು(ಗಾರೆ, ಕ್ಷೌರಿಕ, ಕುಲುಮೆ. ಕಲ್ಲುಕುಟುಕ & ದೋಬಿ)ಗಳ ಸುಧಾರಿತ ಉಪಕರಣಗಳನ್ನು ವಿತರಿಸುತ್ತಿದೆ.
ನೀವು ಕೂಡ ಈ ಯೋಜನೆಯನ್ನು ಪಡೆಯಬೇಕೆಂದರೆ ಈ ಕೆಳಗೆ ನೀಡಿರುವ ಅರ್ಹತೆಗಳನ್ನು ಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ ಹಾಗೂ ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ದಿನನಿತ್ಯದ ಗೌರ್ಮೆಂಟ್ ಉದ್ಯೋಗದ ಮಾಹಿತಿಯನ್ನು ಪಡೆಯಲು ಕೆಳಗೆ ನೀಡಿರುವ ಲಿಂಕ್ ಬಳಸಿ ವಾಟ್ಸಪ್ ಅಥವಾ ಟೆಲಿಗ್ರಾಂ ಗುಂಪುಗಳನ್ನು ಸೇರಿಕೊಳ್ಳಿ.
| ಯೋಜನೆ | ಉಪಕರಣಗಳ ವಿವರ |
| ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು ಯೋಜನೆ | ವಿದ್ಯುತ್ ಚಾಲಿತ ಬಡಗಿ ಉಪಕರಣ ಹಾಗೂ ಗಾರೆ, ಕ್ಷೌರಿಕ, ಕುಲುಮೆ, ಕಲ್ಲುಕುಟುಕ & ದೋಬಿ ಕಸುಬುಗಳ ಸುಧಾರಿತ ಉಪಕರಣ |
| ಜಿಲ್ಲಾ ಉದ್ಯಮ ಕೇಂದ್ರ ಯೋಜನೆ | ವಿದ್ಯುತ್ ಚಾಲಿತ ಹೊಲಿಗೆ ಯಂತ್ರ |
ಅರ್ಹತೆಗಳು
- ಕೋಲಾರ ಜಿಲ್ಲೆಯ ಗ್ರಾಮೀಣ ಪ್ರದೇಶದ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು
- ವಯಸ್ಸು : 18-45 ವರ್ಷ
- ಓದುಬರಹ ಬಲ್ಲವರಾಗಿರಬೇಕು
- ಒಂದು ಕುಟುಂಬಕ್ಕೆ ಒಂದು ಅರ್ಜಿ ಮಾತ್ರ
- ಸರ್ಕಾರಿ ಯೋಜನೆಯಡಿ ಹೊಲಿಗೆಯಂತ್ರ ಪಡೆದವರು, ಸರ್ಕಾರಿ ನೌಕರರು ಅರ್ಹರಲ್ಲ
ಬೇಕಾದ ದಾಖಲೆಗಳು :
- ಪಾಸ್‌ಪೋರ್ಟ್ ಫೋಟೋ (JPG)
- ಜನ್ಮ ದಿನಾಂಕ ನಮೂದಿಸಿರುವ ದಾಖಲೆ (ವರ್ಗಾವಣೆ ಪ್ರಮಾಣ ಪತ್ರ/ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಅಥವಾ ಇನ್ನಿತರ ಪತ್ರ ) (PDF),
- ಜಾತಿ/ಆದಾಯ ಪ್ರಮಾಣ ಪತ್ರ (PDF)
- ಬಿಪಿಎಲ್ ಪಡಿತರ ಚೀಟಿ (PDF)
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 15 ಜನವರಿ 2026 |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
| ಸ್ಥಳ | ಕೋಲಾರ – ಕರ್ನಾಟಕ |
| ಅಧಿಕೃತ ಆದಿ ಸೂಚನೆ | ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು | ಕ್ಲಿಕ್ ಮಾಡಿ |




















