ಭಾರತೀಯ ರಿಸರ್ವ್ ಬ್ಯಾಂಕ್ ಇಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ ಪಾಟ್ನಾ ದಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ, ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ನಿಮಗಾಗಿ ಉತ್ತಮ ಅವಕಾಶವೊಂದು ಕಾಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.
RBI ನಿಂದ ವೈದ್ಯಕೀಯ ಸಲಹೆಗಾರ ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. RBI ಅಧಿಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಈಗಲೇ ಆಫ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29 ಜುಲೈ 2025.
RBI ಅಧಿಸೂಚನೆಯ ವಿವರಗಳು
ಸಂಸ್ಥೆಯ ಹೆಸರು | ಭಾರತೀಯ ರಿಸರ್ವ್ ಬ್ಯಾಂಕ್ Reserve Bank of India |
ಹುದ್ದೆಯ ಹೆಸರು | ಬ್ಯಾಂಕಿನ ವೈದ್ಯಕೀಯ ಸಲಹೆಗಾರ Bank’s Medical Consultant |
ಖಾಲಿ ಹುದ್ದೆಗಳ ಸಂಖ್ಯೆ | 03 |
ಸ್ಥಳ | ಪಾಟ್ನಾ ಬಿಹಾರ |
ಅಪ್ಲೈ ಮಾಡುವ ವಿಧಾನ | ಆಫ್‌ಲೈನ್ |
ಅರ್ಜಿ ಸಲ್ಲಿಸುವ ಆರಂಭ ದಿನಾಂಕ | 09 ಜುಲೈ 2025 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 29 ಜುಲೈ 2025 |
ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ MBBS, ಸ್ನಾತಕೋತ್ತರ ಪದವಿ (MBBS, Post Graduation) ಅನ್ನು ಪೂರ್ಣಗೊಳಿಸಿರಬೇಕು.
ಆಯ್ಕೆ ಪ್ರಕ್ರಿಯೆ:
- ಕಿರು ಪಟ್ಟಿ
- ವೈದ್ಯಕೀಯ ಪರೀಕ್ಷೆ
- ಸಂದರ್ಶನ
ವೇತನ : ತಿಂಗಳಿಗೆ ರೂ.50000/-
ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಪ್ರಾದೇಶಿಕ ನಿರ್ದೇಶಕರು, ಮಾನವ ಸಂಪನ್ಮೂಲ ನಿರ್ವಹಣಾ ಇಲಾಖೆ, ನೇಮಕಾತಿ ವಿಭಾಗ, ಭಾರತೀಯ ರಿಸರ್ವ್ ಬ್ಯಾಂಕ್, ಪಾಟ್ನಾ-800001 (Regional Director, Human Resource Management Department, Recruitment Section, Reserve Bank of India, Patna-800001) ಇಲ್ಲಿಗೆ ಜುಲೈ 29, 2025 ರೊಳಗೆ ಅಥವಾ ಅದಕ್ಕೂ ಮೊದಲು ಕಳುಹಿಸಬೇಕು.
ಪ್ರಮುಖ ಲಿಂಕ್‌ಗಳು
- ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ : ಅಧಿಸೂಚನೆ
- ಅಧಿಕೃತ ವೆಬ್‌ಸೈಟ್: rbi.org.in