ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು ದಿನಾಂಕ 23 ಏಪ್ರಿಲ್ 2026ರಂದು SSLC ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಜನ್ಮ ದಿನಾಂಕ ಹಾಗೂ ನೋಂದಣಿ ಸಂಖ್ಯೆಯನ್ನು ಬಳಸಿ ಫಲಿತಾಂಶವನ್ನು ವೀಕ್ಷಿಸಬಹುದು.
ಈ ಹಿಂದೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ದಿನಾಂಕ 24 ಏಪ್ರಿಲ್ 2026ರಂದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸುವುದಾಗಿ ತಿಳಿಸಿದ್ದರು, ಈಗ ಒಂದು ದಿನದ ಮುಂಚಿತವಾಗಿಯೇ ಪಲಿತಾಂಶವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಹಾಗೂ ಗ್ರೇಡ್ ಅಥವಾ ಅಂಕ ನೀಡುವ ವಿಷಯವಾಗಿ ಸ್ಪಷ್ಟನೆ ನೀಡಲಾಗಿದೆ, ಅಂಕ ಕೊಡುವುದಾಗಿ ಸ್ಪಷ್ಟಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿರುವುದರಿಂದ ಫಲಿತಾಂಶ ಪ್ರಕಟವಾದ ನಂತರ ಎಲ್ಲಾ ವಿದ್ಯಾರ್ಥಿಗಳು ಒಮ್ಮೆಲೇ ವೆಬ್ಸೈಟ್ ಗೆ ಭೇಟಿ ನೀಡುವುದರಿಂದ ವೆಬ್ಸೈಟ್ ಸರ್ವರ್ ಎರರ್ ತೋರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
Link – https://karresults.nic.in/















