ಸಿಬ್ಬಂದಿ ಆಯ್ಕೆ ಆಯೋಗದಿಂದ ಉದ್ಯೋಗಾಂಕ್ಷಿಗಳಿಗಾಗಿ ಇದೀಗ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಲಾಗಿದೆ. ನೀವೇನಾದರೂ SSCಯಲ್ಲಿ ಒಂದೊಳ್ಳೆ ಗೌರ್ಮೆಂಟ್ ಕೆಲಸಕ್ಕಾಗಿ ಹುಡುಕಾಡುತ್ತಿದ್ದರೆ, ಸಿಬ್ಬಂದಿ ಆಯ್ಕೆ ಆಯೋಗದಿಂದ ನಿಮಗಾಗಿ ಉತ್ತಮ ಅವಕಾಶವನ್ನು ಕಾಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ದೈನಂದಿನ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟನ್ನು ಪರಿಶೀಲಿಸಿ ಅಥವಾ ಈ ಕೆಳಗೆ ನೀಡಿರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಲಿಂಕ್ ಮೂಲಕ ನಮ್ಮ ಗುಂಪುಗಳಿಗೆ ಸೇರಿಕೊಳ್ಳಿ.
ಸಿಬ್ಬಂದಿ ಆಯ್ಕೆ ಆಯೋಗವು ಬರೋಬ್ಬರಿ 1340 ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಿದೆ. ಗೌರ್ಮೆಂಟ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ. SSC ಅಧಿಸೂಚನೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಈಗಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21 ಜುಲೈ 2025.
SSC ಅಧಿಸೂಚನೆಯ ವಿವರಗಳು
ಸಂಸ್ಥೆಯ ಹೆಸರು | ಸಿಬ್ಬಂದಿ ಆಯ್ಕೆ ಆಯೋಗ (Staff Selection Commission) |
ಹುದ್ದೆಯ ಹೆಸರು | ಜೂನಿಯರ್ ಎಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್) (Junior Engineer (Civil, Mechanical & Electrical)) |
ಖಾಲಿ ಹುದ್ದೆಗಳ ಸಂಖ್ಯೆ | 1340 |
ಸ್ಥಳ | ಭಾರತದಾದ್ಯಂತ |
ಅಪ್ಲೈ ಮಾಡುವ ವಿಧಾನ | ಆನ್ಲೈನ್ |
ಅರ್ಜಿ ಸಲ್ಲಿಸುವ ಆರಂಭ ದಿನಾಂಕ | 30 ಜೂನ್ 2025 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 21 ಜುಲೈ 2025 |
ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಸಿವಿಲ್/ಮೆಕ್ಯಾನಿಕಲ್/ಎಲೆಕ್ಟ್ರಿಕಲ್‌ನಲ್ಲಿ ಡಿಪ್ಲೊಮಾ, ಪದವಿ, ಬಿಇ/ ಬಿ.ಟೆಕ್ (Diploma, Degree, BE/ B.Tech in Civil/ Mechanical/ Electrical) ಅನ್ನು ಪೂರ್ಣಗೊಳಿಸಿರಬೇಕು.
ವಯಸ್ಸಿನ ಮಿತಿ :
- ಗರಿಷ್ಠ ವಯಸ್ಸಿನ ಮಿತಿ – 32 ವರ್ಷ
ಅರ್ಜಿ ಶುಲ್ಕ:
- SC/ST/PwBD/ಮಾಜಿ ಸೈನಿಕರು/ಮಹಿಳಾ ಅಭ್ಯರ್ಥಿಗಳು: ಇಲ್ಲ
- ಸಾಮಾನ್ಯ/OBC/EWS ಅಭ್ಯರ್ಥಿಗಳು: ರೂ.100/-
ಆಯ್ಕೆ ಪ್ರಕ್ರಿಯೆ:
- ಶ್ರೇಣಿ-I CBT (ವಸ್ತುನಿಷ್ಠ ಪ್ರಕಾರ)
- ಶ್ರೇಣಿ-II CBT (ತಾಂತ್ರಿಕ ವಿಷಯ)
- ದಾಖಲೆ ಪರಿಶೀಲನೆ
ಪ್ರಮುಖ ದಿನಾಂಕ

ಪ್ರಮುಖ ಲಿಂಕ್‌ಗಳು
- ಅಧಿಕೃತ ಅಧಿಸೂಚನೆ : ಅಧಿಸೂಚನೆ
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್‌ಸೈಟ್: ssc.gov.in