LATEST JOB NEWS
DC Office Gadag Recruitment 2026 | 154 Civil Servants Posts, Eligibility, Apply Offline | DHFWS Udupi Recruitment 2026 | 03 Clinical Psychologist, Optometrist Posts, Eligibility, Apply Offline | BWSSB Recruitment 2026 | 210 Water Supply Operator Posts, Eligibility, Apply Online | SPLOCA Recruitment 2026 | 01 Legal Typist Posts, Eligibility, Apply Offline | Bank of Baroda Recruitment 2026 | Local Bank Officer Posts, Eligibility, Apply Online |

ಮಳೆಗಾಲದಲ್ಲಿ ಹೆಚ್ಚು ಕೆಂಪುಕಣ್ಣು /ಮದ್ರಾಸ್ ಐ (CONJUNCTIVITIS) ಕಾಣಿಸಿಕೊಳ್ಳಲು ಕಾರಣವೇನು? ಅದನ್ನು ತಡೆಯುವುದು ಹೇಗೆ?

ಮದ್ರಾಸ್ ಐ / Conjunctivitis ಅಥವಾ Red eye ಎಂದರೆ ಎಲ್ಲರಿಗೂ ತಿಳಿದಿರುತ್ತದೆ, ಮತ್ತು ಎಷ್ಟೋ ಜನಕ್ಕೆ ಅದರ ಅನುಭವ ಕೂಡಾ ಆಗಿರುತ್ತದೆ ಅಲ್ವಾ ? ಹಾಗಾದ್ರೆ ಈ ಮದ್ರಾಸ್ ಐ ಮಳೆಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳಲು ಕಾರಣವೇನು?

WhatsApp Group Join Now
Telegram Group Join Now

ಏಕೆಂದರೆ, ಮಳೆಗಾಲದಲ್ಲಿ ಆರ್ದ್ರತೆ (humidity) ಜಾಸ್ತಿ ಆಗುವುದರಿಂದ ಹಾಗೂ ಗಾಳಿಯಲ್ಲಿನ ತೇವಾಂಶ(moisture) ಜಾಸ್ತಿ ಆಗುವುದರಿಂದ ಬ್ಯಾಕ್ಟೀರಿಯಾ(bacteria) ಹಾಗೂ ವೈರಸ್ (virus) ಗಳ ಬೆಳವಣಿಗೆಯು ಹೆಚ್ಚಾಗಿರುತ್ತದೆ ಇದರಿಂದಾಗಿ ಮದ್ರಾಸ್ ಐ ಹೆಚ್ಚಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಬ್ಯಾಕ್ಟೀರಿಯಲ್ ಕಾಂಜಂಕ್ಟಿವಿಟಿಸ್ (bacterial conjunctivitis) ಅಥವಾ ವೈರಲ್ ಕಾಂಜಂಕ್ಟಿವಿಟಿಸ್ (viral Conjunctivitis) ಹೆಚ್ಚಾಗಿರುತ್ತದೆ.

conjunctivitis ಅಥವಾ ಮದ್ರಾಸ್ ಐ ಎಂದರೆ ಕಣ್ಣಿನ ಬಿಳಿ ಭಾಗದಲ್ಲಿ (sclera) ಆಗುವ ಉರಿಯುತ.. ಕೆಲವು ಸಂದರ್ಭದಲ್ಲಿ ಇದು ಕಣ್ಣಿನ ಕಪ್ಪು ಗುಡ್ಡೆಗೆ (cornea) ಕೂಡ ಹರಡುವ ಸಾಧ್ಯತೆ ಇರುತ್ತದೆ.. ತುಂಬಾ ಜನ ಇದು ಹೆಚ್ಚು ಅಪಾಯಕಾರಿ ಅಲ್ಲ ಇದಕ್ಕೆ ಮನೆಯಲ್ಲಿ ಮದ್ದು ಮಾಡಬಹುದು ಎಂದು ಅಂದುಕೊಳ್ಳುತ್ತೀರಿ.. ಹೌದು, ಇದು ಅಷ್ಟೇನೂ ಅಪಾಯಕಾರಿ ಅಲ್ಲ ಇದು ಯಾವುದೇ ದೃಷ್ಟಿ ಸಮಸ್ಯೆ ಉಂಟುಮಾಡುವುದಿಲ್ಲ ಆದರೆ ಯಾವಾಗ ಇದರ ಪರಿಣಾಮ ಕಪ್ಪುಗುಡ್ಡೆಯ ಮೇಲೆ ಬೀಳುತ್ತದೆಯೋ ಆಗ ದೃಷ್ಟಿ ಸಮಸ್ಯೆ ಆಗುವ ಸಾಧ್ಯತೆ ಇದೆ ಆದ್ದರಿಂದ ವೈದ್ಯರ ಸಲಹೆ ಪಡೆಯುವುದು ಹಾಗೂ ಚಿಕಿತ್ಸೆ ಪಡೆಯುವುದು ಉತ್ತಮ…

ತುಂಬಾ ಜನಕ್ಕೆ ಇದು ಒಬ್ಬರಿಂದ ಒಬ್ಬರಿಗೆ ಹರಡುವುದು ನಿಜವೇ ಎಂದು ಅನುಮಾನವಿರುತ್ತದೆ. ಹೌದು, ಇದು ಅತಿ ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ..

ಸಂಕೇತಗಳು ಮತ್ತು ಲಕ್ಷಣಗಳು

  • ಕಣ್ಣು ನೋವು
  • ಕಣ್ಣು ಕೆಂಪಾಗಿರುವುದು
  • ಬೆಳಕಿಗೆ ಕಣ್ಣು ಬಿಡಲು ಸಾಧ್ಯವಾಗದಿರುವುದು
  • ಕಣ್ಣಲ್ಲಿ ಏನೋ ಬಿದ್ದಿರುವ ಹಾಗೆ ಅನುಭವವಾಗುವುದು
  • ಕಣ್ಣಿನಲ್ಲಿ ಬಿಳಿ ವಿಸರ್ಜನೆ ಹೆಚ್ಚಾಗಿ ಆಗುವುದು
  • ಬೆಳಗ್ಗೆ ಎದ್ದಾಗ ಕಣ್ಣು ರೆಪ್ಪೆಗಳು ಅಂಟಿಕೊಂಡಿರುತ್ತದೆ

ಕೆಲವು ಸಲಹೆಗಳು

  • ಇದು ಅತಿ ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುವ ಕಾರಣದಿಂದಾಗಿ ವೈದ್ಯರ ಸಲಹೆ ಪಡೆಯುವುದು ಉತ್ತಮ
  • ಕಡಿಮೆಯಾಗುವವರೆಗೂ ಐದು ಅಥವಾ ಆರು ದಿನಗಳ ಕಾಲ ಮನೆಯಲ್ಲಿ ಇರುವುದು ಉತ್ತಮ
  • ವೈದ್ಯರ ಸಲಹೆ ಹಾಗೂ ಚಿಕಿತ್ಸೆ ಪಡೆಯುವುದು ಉತ್ತಮ
  • ಸ್ವಯಂ ಚಿಕಿತ್ಸೆಯನ್ನು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿ
  • ಪದೇ ಪದೇ ಕಣ್ಣನ್ನು ಮುಟ್ಟಿಕೊಳ್ಳಬೇಡಿ.. ಪದೇ ಪದೇ ಕೈತೊಳೆದುಕೊಳ್ಳುತ್ತಿರಿ..
  • ಪದೇಪದೇ ಶುದ್ಧ ನೀರನ್ನು ಬಳಸಿ ಕಣ್ಣನ್ನು ಸ್ವಚ್ಛಗೊಳಿಸುವುದು ಉತ್ತಮ
  • ನಿಮ್ಮ ವಸ್ತುವನ್ನು ಬೇರೆಯವರೊಂದಿಗೆ ಶೇರ್ ಮಾಡಿಕೊಳ್ಳಬೇಡಿ ( ಟವಲ್ ಕನ್ನಡಕ ಇತರೆ ವಸ್ತುಗಳು)
  • ಕಾಂಟ್ಯಾಕ್ಟ್ ಲೆನ್ಸ್ ಬಳಸುವವರು ಹೆಚ್ಚಿನ ಜಾಗ್ರತೆ ವಹಿಸಬೇಕು ( ಸೋಂಕು ಹರಡುವ ಸಾಧ್ಯತೆ ಜಾಸ್ತಿ ಇರುತ್ತದೆ)
  • ಕಾಂಟಾಕ್ಟ್ ಲೆನ್ಸ್ ಬಳಸುವವರಿಗೆ ಸೋಂಕು ಹರಡಿದರೆ ಏಳರಿಂದ ಎಂಟು ದಿನಗಳ ಕಾಲ ಕಾಂಟ್ಯಾಕ್ಟ್ ಲೆನ್ಸ್ ಬಳಸದಿರುವುದು ಉತ್ತಮ.

Leave a Comment