ಮಾವಿನ ಹಣ್ಣುಗಳನ್ನು ತಿಂದ ನಂತರ ಅಥವಾ ತಿನ್ನುವ ಮುಂಚೆ ಈ ತಪ್ಪುಗಳನ್ನು ಮಾಡಬೇಡಿ

ಮಾವಿನ ಹಣ್ಣು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ .. ಎಲ್ಲರು ಏಪ್ರಿಲ್ ಇಂದ ಜೂನ್ ವರೆಗೂ ಇಷ್ಟ ಪಟ್ಟು ತಿನ್ನುವ ಒಂದು ಹಣ್ಣು ಎಂದರೆ ಅದು ಮಾವಿನ ಹಣ್ಣು.. ನಿಮಗೆಲ್ಲ ಗೊತ್ತೇ ಇದೆ ಈಗಂತು ಎಲ್ಲ ಕಡೆಯಲ್ಲು ಮಾವಿನ ಹಣ್ಣಿನ ಮೇಳ ಹೆಚ್ಚು ನಡೆಯುತ್ತದೆ ಮತ್ತು ಮಾರುಕಟ್ಟೆಯಲ್ಲಿ ವಿಭಿನ್ನವಾಗಿರುವ ಮಾವಿನ ಹಣ್ಣುಗಳನ್ನು ಮಾರಲಾಗುತ್ತದೆ.

WhatsApp Group Join Now
Telegram Group Join Now

ಮಾವಿನ ಹಣ್ಣನ್ನು ಸವಿದ ತಕ್ಷಣವಾಗಿ ನಾವು ಮಾಡುವ ಕೆಲವು ತಪ್ಪುಗಳಿಂದ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಮತ್ತು ಜೀರ್ಣಕ್ರಿಯೆಯ ಕೆಲವು ಸಮಸ್ಯೆಗಳು ಕಂಡುಬರುತ್ತವೆ. ಆದರಿಂದ ಮಾವಿನ ಹಣ್ಣು ತಿಂದ ನಂತರ ಈ ತಪ್ಪುಗಳನ್ನು ಮಾಡಬೇಡಿ

  • ಮಾವಿನ ಹಣ್ಣು ತಿಂದ ತಕ್ಷಣ ನೀರು ಕುಡಿಯಬೇಡಿ : ತಕ್ಷಣ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗಲು ಸಾಧ್ಯವಾಗುವುದಿಲ್ಲ ಆದ್ದರಿಂದ ಮಾವಿನ ಹಣ್ಣು ತಿಂದ 30 ನಿಮಿಷಗಳ ನಂತರ ನೀರು ಕುಡಿಯಿರಿ.
  • ಹೆಚ್ಚು ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಬೇಡಿ : ಮಾವಿನ ಹಣ್ಣನ್ನ ತಿಂದ ನಂತರ ಅಥವಾ ತಿನ್ನುವ ಮುಂಚೆ ಅಥವಾ ಜೊತೆಗೆ ಹೆಚ್ಚು ಮಸಾಲೆ ಬಳಸಿರುವ ಪಧಾರ್ಥ ತಿನ್ನುವುದರಿಂದ ಹೊಟ್ಟೆ ಕೆಡುವ ಸಾಧ್ಯತೆ ಇರುತ್ತದೆ.
  • ಹಗಲಕಾಯಿಯನ್ನು ಮಾವಿನ ಹಣ್ಣಿನ ಜೊತೆಗೆ ತಿನ್ನಬಾರದು : ಮಾವಿನ ಹಣ್ಣು ತಿಂದ ನಂತರ ಕಹಿ ಪದಾರ್ಥವನ್ನು ತಿನ್ನಬಾರದು.
  • ಮಾವಿನ ಹಣ್ಣು ತಿಂದ ನಂತರ ಹಾಲು ಕುಡಿಯುವುದು ಅಥವಾ ಮೋಸರಿನೊಂದಿಗೆ ಮಾವಿನ ಹಣ್ಣು ತಿನ್ನುವುದು ಕೂಡ ಒಳ್ಳೆಯದಲ್ಲ.
  • ತಂಪು ಪಾನೀಯಗಳನ್ನು ಕುಡಿಯಬೇಡಿ: ಮಾವಿನ ಹಣ್ಣು ತಿಂದ ತಕ್ಷಣ ತಂಪು ಪಾನೀಯಗಳನ್ನು ಕುಡಿಯುವುದರಿಂದ ಹಣ್ಣಿನಲ್ಲಿರುವ ಸಕ್ಕರೆ ಅಂಶ ಜೀರ್ಣವಾಗದೆ ಹೊಟ್ಟೆಯಲ್ಲಿ ಅನಿಲ ಉಂಟಾಗುತ್ತದೆ.

WhatsApp Group Join Now
Telegram Group Join Now

Leave a Comment